Harikrishna Poojary. MSW HR Executive Director Supriya H. MBA Finace Director - RCTA Examination Board ನಿರ್ದೇಶಕರ ಸಂದೇಶ ಗ್ರಾಮೀಣ ಕಂಪ್ಯೂಟರ್ ತರಬೇತಿ ಆಕಾಡೆಮಿಯ ಮುಖ್ಯ ಉದ್ದೇಶ, ಬಡ, ಮಧ್ಯಮ ವರ್ಗ ಹಾಗೂ ಯಾವುದೇ ಪ್ರಾಯ ಮಿತಿಯಾಗಲೀ ಹೆಣ್ಣು ಗಂಡು ಎಂಬ ಬೇಧವಿಲ್ಲದೆ ಕಂಪ್ಯೂಟರ್ ತರಬೇತಿಯನ್ನು ಕರ್ನಾಟಕ ಸರಕಾರದ ಗ್ರಾಮೀಣ ಜನರ ಕೌಶಲ್ಯ ಅಭಿವ್ರದ್ಧಿಗೆ ಪೂರಕವಾಗಿ ದೇಶದ ಉದ್ದಗಲಕ್ಕೂ ಪಸರಿಸುವುದು ಮಾತ್ರವಲ್ಲದೆ ಹಳ್ಳಿ ಹಳ್ಳಿಗಳಲ್ಲೂ ಉದ್ಯೋಗ ಸ್ರಷ್ಟಿಸುವುದೇ ಆಗಿದೆ. ಈಗಾಗಲೇ ಕರ್ನಾಟಕದ ರಾಜಧಾನಿ ಬೆಂಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಶಿವಮೊಗ್ಗ, ಗುಲ್ಬರ್ಗಾ, ಬೆಳಗಾಂ, ಚಿಕ್ಕಮಂಗಳೂರು,ಕೊಪ್ಪಳ ಜಿಲ್ಲೆಗಳಲ್ಲೂ ಗ್ರಾಮೀಣ ಕಂಪ್ಯೂಟರ್ ತರಬೇತಿ ಆಕಾಡೆಮಿ ಕೇಂದ್ರಗಳು ಆರಂಭಗೊಂಡಿದೆ. ಇದು ಯಾವುದೇ ಗ್ರಾಮ, ಪಟ್ಟಣ, ರಾಜ್ಯದ ಗಡಿಯ ಇತಿಮಿತಿಯಿಲ್ಲದೆ ದೇಶದ ಉಳಿದೆಡೆಗಳಲ್ಲಿ ಕರ್ನಾಟಕ ಸರಕಾರದ ಗ್ರಾಮೀಣ ಜನರ ಕೌಶಲ್ಯ ಅಭಿವ್ರದ್ಧಿಗೆ ಪೂರಕವಾಗಿ ಶೀಘ್ರದಲ್ಲೇ ಆರಂಭಗೊಳ್ಳುತ್ತಲಿದೆ.